ಪದ್ಯ
ಯಾವುದಕ್ಕೂ ಅಸ್ತಿತ್ವವಿಲ್ಲ,
ನಾನು ಮುಟ್ಟಿದ್ದು
ಅವಳಿಗೆ ನೆನಪಷ್ಟೇ,
ಒಂದೂ ಗುರುತಿಲ್ಲ!!
ಯಾವುದಕ್ಕೂ ಅಸ್ತಿತ್ವವಿಲ್ಲ,
ನಾನು ಮುಟ್ಟಿದ್ದು
ಅವಳಿಗೆ ನೆನಪಷ್ಟೇ,
ಒಂದೂ ಗುರುತಿಲ್ಲ!!
ಪ್ರತಿ ಪದ್ಯ
ಕುರುಹೇ ಇಲ್ಲ
ಎಂದುಕೊಂಡವ
ಅವಳ ಕಂಕುಳಲ್ಲಿ
ಮಗು ನಕ್ಕಾಗ
ಬೆಚ್ಚಿ ಬಿದ್ದ!
*****
ಮಳೆ ಹನಿಗೆ ಬಣ್ಣವಿಲ್ಲ
ಹಾಗಂದವರು ಯಾರು?
ಫಳ್ಳನೇ ನಿನ್ನ ಕಣ್ಣಂಚಲ್ಲಿ
ಮಿಂಚಿದ್ದು ಯಾವ ಬಣ್ಣ?
ಸರಿರಾತ್ರಿಯಲ್ಲೂ
ಮೈಯೆಲ್ಲಾ ಸವರಿ
ಹೋಯಿತೆಲ್ಲಾ..
ಅದಲ್ಲವೇ ಬಣ್ಣ?
ಕಿಟಕಿಯಾಚೆ ಹನಿ ಸಿಡಿದಾಗ
ಬೆರಳೊಡ್ಡಿ, ಮುಖಕ್ಕೆ
ಮುಖಕ್ಕೆ ಸವರಿಕೊಳ್ಳುವೆಯಲ್ಲ
ಅದಲ್ಲವೆ ಬಣ್ಣ?
******
ಸರಿ ರಾತ್ರಿಗಳಲ್ಲಿ ಕೇಳಿದ
ಹಾಡುಗಳೆಲ್ಲಾ ಈಗ
ಸುಮ್ಮನೆ ಮಲಗಿವೆ..
ನಿನ್ನ ಹೆಸರಿನ ಕನವರಿಕೆಗಳಿಗೆ
ಸಮಾಧಾನ ಹೇಳಬೇಕಿತ್ತು
ಮರೆತೆ.
ಹೆಜ್ಜೆ ಜೊತೆಯಾಗಿ
ಸಂಜೆ ಹಿತವಾಗಿ
ಸವೆಸಿದ ಹಾದಿಗುಂಡ
ನಿನ್ನ ಬೆರಳ ತುದಿ
ಮುಟ್ಟುವುದಕ್ಕೆ
ಹಾತೊರೆದೆ, ನೀನು
ಸಂಜೆಗತ್ತಲಲ್ಲಿ ಕರಗಿದೆ..

2 ಹೀಗಂತಾರೆ:
salugalu chennagide- hema.
ee padya tumba chennagide...saalugalu yedeguudige sikku bikkalisuvanthe maduttave...
ಒಂದು ಕಮೆಂಟನ್ನು ಪೋಸ್ಟ್ ಮಾಡಿ