ಬಹುಶಃ ಇಷ್ಟು ದಿನ ಬ್ಲಾಗಿಗೆ ಭೆಟ್ಟಿ ಕೊಟ್ಟ ಮಿತ್ರರು ಬೈದುಕೊಂಡಿರಲೇಬೇಕು. ಒಂದಿಷ್ಟು ಫೋಟೋ.. ಒಂದಿಷ್ಟು ವಿಡಿಯೋಗಳನ್ನು ಬಿಟ್ಟು ಬೇರೇನೂ ಪ್ರಕಟಿಸಿರಲಿಲ್ಲ. ಬರೆಯುವ ಉತ್ಸಾಹವಿರಲಿಲ್ಲ. ಟೈಮ್ ಇರಲಿಲ್ಲ. ವಿಷಯವಿರಲಿಲ್ಲ. ಏನಾದರೂ ಕಾರಣ ಹೇಳಬಹುದು. ಈಗ ಅದರಿಂದೇನು ಪ್ರಯೋಜನವಿಲ್ಲ, ಅಲ್ವೆ?
ನಾವೆಲ್ಲ ಏಕತಾನತೆಯ ಬದುಕು ಮತ್ತು ಬೇರೆಲ್ಲ ಜಂಜಾಟಗಳಲ್ಲಿ ಕಳೆದುಕೊಳ್ಳೊ ಉತ್ಸಾಹ, ಆಸಕ್ತಿ, ಶಾಂತಿಯನ್ನು ಬೇರೊಂದು ಕೆಲಸ ಮಾಡುವ ಮೂಲಕ ಪಡೆದುಕೊಳ್ಳುತ್ತೇವೆ. ಇಲ್ಲವಾದರೆ ಬದುಕುವುದು ಕಷ್ಟವಾಗುತ್ತದೆ. ಮೊನ್ನೆ ಜಪಾನಿನ ಚಹಾ ಕುಡಿಯುವ ಕೊಠಡಿಗಳ ಬಗ್ಗೆ ಓದ್ತಾ ಇದ್ದೆ. ಅದರಲ್ಲಿ ಚಹಾ ಕೊಠಡಿಯಲ್ಲಿ ಒಂದು ವಸ್ತು, ಒಂದು ಬಣ್ಣ ರಿಪೀಟ್ ಆಗದಂತೆ ನೋಡಿಕೊಳ್ಳುತ್ತಾರೆ ಎಂಬ ಮಾಹಿತಿ ಇತ್ತು. ಕೊಠಡಿಯಲ್ಲಿ ತಾಜಾ ಹೂಗಳನ್ನು ತುಂಬಿಕೊಂಡ ಹೂದಾನಿ ಇಟ್ಟಿದ್ದರೆ, ಹೂವಿನ ಚಿತ್ರವನ್ನು ಕೊಠಡಿಯಲ್ಲಿ ಇಡುವುದಿಲ್ಲವಂತೆ. ಹಾಗೇ ಬಣ್ಣಗಳೂ ರಿಪೀಟ್ ಆಗುವುದಿಲ್ಲ. ಏಕತಾನತೆ ಲವಲೇಶ ಕೂಡ ಇರಬಾರದೆಂದು ಅವರು ಎಚ್ಚರ ವಹಿಸುವ ರೀತಿ ಇದು. ಹೀಗೆ ಚಹಾ ಸೇವಿಸುವ ಸಂದರ್ಭವನ್ನು ಸುಂದರವೂ, ಪ್ರಕೃತಿ ಸಹಜವೂ ಆಗಿರುವಂತೆ ನೋಡಿಕೊಳ್ಳುತ್ತಾರಂತೆ.
ನಾನು ಈ ಬ್ಲಾಗಿನ ಸ್ವರೂಪವನ್ನು ಆಗಾಗ ಬದಲಿಸುವುದು ಅಂಥದ್ದೇ ಕಾರಣಕ್ಕೆ ಎಂದು ನನ್ನ ಭಾವನೆ.
ಇಲ್ಲೇನು ಹೊಸತು ಮಾಡುತ್ತಾ ರಿಫ್ರೆಶ್ ಆಗುತ್ತೇನೆ. ಬಂದು ಹೋಗುವ ನೀವೂ ರಿಫ್ರೆಶ್ ಆದರೆ ನನಗೆ ಖುಷಿ..
ಸದ್ಯ ರೀಲಾಂಚ್ ಮಾಡಿದ ಖುಷಿಯಲ್ಲಿ ಲಂಕೇಶರ ಮನಕೆ ಕಾರಂಜಿಯ ಸ್ಪರ್ಶ ಕೃತಿಯಿಂದ ಒಂದು ಇಷ್ಟವಾದ ಲೇಖನ ಇಲ್ಲಿ ಪಬ್ಲಿಶ್ ಮಾಡ್ತಾ ಇದ್ದೀನಿ.. ನಂಬಿಕೆ, ವಿಧೇಯತೆ, ರಾಜಕಾರಣಿಗಳ ಮೌಢ್ಯ, ಆತ್ಮಾಭಿವ್ಯಕ್ತಿ ಕುರಿತು ಹೆರಾಲ್ಡ್ ಲಾಸ್ಕಿ ಬರೆದ ಲೇಖನದ ಬಗ್ಗೆ ಲಂಕೇಶ್ ಬರೆದಿದ್ದಾರೆ. ನಿಮಗೆ ಒಳ್ಳೇ ಓದು ಎಂದು ನನ್ನ ಭಾವನೆ... ಖುಷಿ ಕೊಡಲಿ.. ಓವರ್ ಟು....
ವಿಧೇಯತೆಯ ಅಪಾಯಗಳು
ದೈಹಿಕ, ಮಾನಸಿಕ ಬಿಕ್ಕಟ್ಟು ಎಂದಾದರೊಮ್ಮೆ ಅಣಕಿಸತೊಡಗುತ್ತದೆ. ಒಂದು ಕ್ಷಣದಲ್ಲಿ ಬರೆದು ಬಿಡಬಹುದೆಂದು ಎಂದೋ ಮಾಡಿಕೊಂಡಿದ್ದ ಟಿಪ್ಪಣಿಗಳು ಹುರುಪು ಕೊಡುವುದಿಲ್ಲ. ಅವನ್ನು ನೋಡುತ್ತಾ ಕೂರುತ್ತೇನೆ. ಕಾಗದದಲ್ಲಿರುವ ಎಲ್ಲವೂ ಪದಗಳಾಗಿ ಕಾಣುತ್ತಿವೆಯೇ ಹೊರತು ವಾಕ್ಯಗಳಾಗಿ ಕಾಣುವುದಿಲ್ಲ. ವಾಕ್ಯಗಳಾಗದೆ, ಪ್ಯಾರಾಗಳಾಗದೆ ಅವರೆಲ್ಲವೂ ಏನನ್ನೂ ಹೇಳುವುದಿಲ್ಲ. ಅದು ಹೀಗಿದೆ: ``ಇಂಗ್ಲೆಂಡಿನ ಪ್ರಸಿದ್ಧ ಚಿಂತನಕಾರ ಹೆರಾಲ್ಡ್ ಜೆ ಲಾಸ್ಕಿ `ವಿಧೇಯತೆಯ ಅಪಾಯಗಳು' ಅಂತ ಹೇಳಿದ್ದಾನೆ. ನಮ್ಮ ದೇಶದಲ್ಲಿ ಅವಿಧೇಯತೆಯ ಅಪಾಯಗಳ ಬಗ್ಗೆ ನಮಗೆ ಹೇಳಿಕೊಟ್ಟಿದ್ದಾರೆಯೇ ವಿಧೇಯತೆಯಿಂದ ಏನೇನು ಅಪಾಯವಿದೆ ಎಂದು ತಿಳಿಸಿಲ್ಲ. ಇದನ್ನೊಂದು ಟಿಪ್ಪಣಿಯಲ್ಲಿ ವಿವರಿಸು''. ಇದು ನನಗೇ ನಾನು ಕೊಟ್ಟಿಕೊಂಡಿರುವ ಅಪ್ಪಣೆ. ಆರ್ಡರ್. ಹೆರಾಲ್ಡ್ ಜೆ.ಲಾಸ್ಕಿಯ ಪುಸ್ತಕವನ್ನೋದಿದಾಗ ಅದರಲ್ಲಿ ನನಗೆ ಇಷ್ಟವಿಲ್ಲದ್ದು ಬಹಳ ಕಾಣಿಸಿತು; ಅದು ಮೂಲಭೂತವಾಗಿ ಕಮ್ಯುನಿಸ್ಟ್ ಚಿಂತಕರು ಎಲ್ಲೆಲ್ಲೂ ವಿಜೃಂಭಿಸುತ್ತಿದ್ದಾಗ ಅವರ ಪ್ರತಿನಿಧಿಯಾಗಿ ಲಾಸ್ಕಿ ಮಾತನಾಡುತ್ತಿರುವುದಾಗಿ ಅನ್ನಿಸಿತು. ಆದರೆ ಕ್ರಮೇಣ ಲಾಸ್ಕಿ ತರಹದ ಚಿಂತಕರು ಹೇಗೆ ತಮ್ಮ ಸೂಕ್ಷ್ಮಜ್ಞತೆ ಮತ್ತು ನ್ಯಾಯವಂತಿಕೆಯಿಂದಾಗಿ ಎಲ್ಲ ಕಾಲಕ್ಕೆ ಸಲ್ಲತಕ್ಕ ಮಾತಾಡುತ್ತಾರೆ ಎಂದು ವಿಸ್ಮಯವಾಯಿತು. ಅದು ಹೀಗೆ. ನಾವು ಸಾಮಾನ್ಯವಾಗಿ ಅಪ್ಪ ಹೇಳಿದ್ದ, ಪುರೋಹಿತ ಹೇಳಿದ್ದು, ಸಂಪ್ರದಾಯ ಹೇಳಿದ್ದು ಸರ್ವಕಾಲಿಕ ಸತ್ಯ, ಅದನ್ನು ಪ್ರಶ್ನಿಸದೆ ಅನುಸರಿಸುವುದು ಒರ್ಳಳೆಯದು ಎಂದು ತಿಳಿದಿರುತ್ತೇವೆ; ಇದರಿಂದಾಗಿಯೇ ಗಾಂಧೀಜಿಯ ಮಾತು, ಜಗದ್ಗುರುವಿನ ಮಾತು, ವಿವೇಕಾನಂದರ ಮಾತು ಎಂದು ವಿಧೇಯರಾಗಿ ನಡೆದುಕೊಳ್ಳುತ್ತೇವೆ. ಇದೆಲ್ಲದರ ವಿರುದ್ಧ ಪ್ರತಿಭಟಿಸುವುದು ಪರಿಣಾಮಕಾರಿ ಎಂದು ಹಿಂದೆ ಮುಂದೆ ನೋಡದೆ, ಚಿಂತಸದೆ ಪ್ರತಿಭಟಿಸುತ್ತೇವೆ. ಇವೆರಡೂ ಅಪಾಯಕಾರಿ ವಿಧೇಯತೆಗಳೇ; ಮೊದಲನೆಯದು ಒಂದು ವ್ಯವಸ್ಥೆಯ ರಕ್ಷಣೆಯಲ್ಲಿರುವ ಮೌಢ್ಯವಾದರೆ, ಎರಡನೆಯದು ಪರಿಣಾಮಕ್ಕಾಗಿ ಮಾಡಿದ ಪ್ರತಿಭಟನೆಯಾದ್ದರಿಂದ ಇದು ಮೊದಲನೆಯದರಷ್ಟೇ ವ್ಯರ್ಥ. ಕಳೆದ ಸಾವಿರ ವರ್ಷದ ನಾಗರಿಕತೆಯ ಬೆಳವಣಿಗೆ ಇವೆರಡನ್ನೂ ಒಪ್ಪುವುದಿಲ್ಲ. ಎಲ್ಲರೂ ಚಚರ್್ ಹೇಳಿದ್ದನ್ನು ಮರುಮಾತಿಲ್ಲದೆ ಒಪ್ಪಿಕೊಳ್ಳುತ್ತಿದ್ದಾಗ ಚಚರ್್, ಬೈಬಲ್ ಮತ್ತು ಪಆದ್ರಿಯ ಬಗ್ಗೆ ಕುತೂಹಲ, ಆಕ್ಷೇಪಣೆಗಳು ಶುರುವಾದವು. ಅಕ್ಷರ ಮತ್ತು ತಿಳಿವಳಿಕೆ ಎಲ್ಲರ ಜನ್ಮಸಿದ್ಧ ಹಕ್ಕಾಗುತ್ತಿದ್ದಂತೆ ವ್ಯಕ್ತಿ ಆಳದ ಅನಿಸಿಕೆಗಳಿಂದಲೇ ಸಾರ್ವಜನಿಕ ಬದುಕು ಉತ್ತಮಗೊಳ್ಳುತ್ತದೆಂಬುದು ಗೊತ್ತಾಯಿತು. ಜನರೆಲ್ಲರೂ ಒಂದೇ ರೀತಿಯಲ್ಲಿ ಯೋಚಿಸುವಂತೆ ಮತ್ತು ವತರ್ಿಸುವಂತೆ ಕಂಡರೂ ಪ್ರತಿಯೊಬ್ಬ ವ್ಯಕ್ತಿಯೂ ತನ್ನದೇ ಆದ ಸಂಕಟ, ವಿಶೇಷ ತೊಳಲಾಟ ಹೊಂದಿರುತ್ತಾನೆ. ಒಂದು ಜನ ಸಮೂಹದ ನಂಬಿಕೆಗೆ ತನ್ನ ಆಳದ ಅನಿಸಿಕೆ ವಿರುದ್ಧವಾಗಿದ್ದರೆ ಅದನ್ನು ಹೇಳಿಕೊಳ್ಳುವುದು ಆತನ ಕರ್ತವ್ಯ ಮತ್ತು ಹಕ್ಕು. ಆತನ ಅನಿಸಿಕೆ ನೀಶೆ ಎಂಬ ತತ್ವಜ್ಞಾನಿಯಲ್ಲಿ ಕಂಡುಬಂದಂಥ ಅಪೂರ್ವ ಅನಿಸಿಕೆ ಇರಬಹುದು; ಅದರಿಂದ ಒಂದು ನಾಗರಿಕತೆಯ ಗ್ರಹಿಕೆಯ ಕ್ರಮವೇ ಬದಲಾಗುತ್ತದೆ ಅಥವಾ ಇನ್ನೊಬ್ಬ ವ್ಯಕ್ತಿಯ ಅನಿಸಿಕೆ ಒಂದು ಪುರಸಭೆಯ ಕಾರ್ಯವೈಖರಿಯ ಬಗ್ಗೆ ಖಂಡನೆ ಇರಬಹುದು; ಅದು ಪುರದ ಜನರಿಗಾದರೂ ಒಳ್ಳೆಯದಾಗುತ್ತದೆ. ಆದ್ದರಿಂದ ಒಂದು ಸಮುದಾಯದ ಬದುಕು ಮತ್ತು ತನ್ನ ಖಾಸಗಿ ಬದುಕು -ಎರಡನ್ನೂ ಒಂದು ಜೀವ ಹೊತ್ತಿರುತ್ತದೆ. ಆದ್ದರಿಂದ ಹೆರಾಲ್ಡ್ ಲಾಸ್ಕಿ ಹೇಳುತ್ತಾನೆ : ``ಸಾಮೂಹಿಕ ವ್ಯವಸ್ಥೆಯ ವಿಷಯದಲ್ಲಿ ಇದೇ ಕಟ್ಟಕಡೆಯ ಮಾತು ಎಂದು ಯಾರೂ ಹೇಳಲಾಗುವುದಿಲ್ಲ. ನಾವು ಯಾವುದನ್ನೂ ಮೂಲಭೂತ ಎಂದು ನಂಬಿಕೊಂಡಿದ್ದೇವೋ ಅದು ಬೇರೆ ವೇಳೆಯಲ್ಲಿ ಮತ್ತು ಬೇರೆ ಜಾಗದಲ್ಲಿ ರಾಕ್ಷಸೀ ವ್ಯವಸ್ಥೆಯೆಂದು ಕಂಡುಬಂದಿದೆ. ಆಸ್ತಿ, ಮದುವೆ, ಧರ್ಮ, ಶಿಕ್ಷಣ ಇತ್ಯಾದಿಗಳ ಬಗ್ಗೆ ಚರಿತ್ರೆಯಲ್ಲಿ ಅನೇಕ ಸಲ ಅನಿಸಿಕೆಗಳು ಬದಲಾಗಿವೆ, ಬದಲಾಗುತ್ತಲೇ ಹೋಗುತ್ತವೆ. ಆದ್ದರಿಂದ ಇವುಗಳೆಲ್ಲದರ ಅನುಭವವನ್ನು ಖುದ್ದಾಗಿ ಪಡೆಯುತ್ತಿರುವ ಇವತ್ತಿನ ನಾವು ನಮಗೆ ಖಾಸಗಿಯಾಗಿ ಅನ್ನಿಸುತ್ತಿರುವುದನ್ನು ಹೇಳಬೇಕಾದ್ದು ಕರ್ತವ್ಯ; ಇಲ್ಲಿ ನಮ್ಮೆಲ್ಲರ ಅನುಭವ ಹೇಳದಿದ್ದರೆ ಸಾರ್ವಜನಿಕ ನಿಮಯಗಳು ಆರೋಗ್ಯಕರವಾಗಿ ರೂಪಗೊಳ್ಳುವುದಿಲ್ಲ; ಯಾಕೆಂದರೆ ಆಗಲೇ ಇರುವ ನಿಯಮಗಳು, ಕಾನೂನುಗಳೆಲ್ಲ ಇನ್ನೊಬ್ಬರ ಅನುಭವವನ್ನು ಆಧರಿಸಿ ರೂಪುಗೊಂಡಂಥವು. ಅವರು ತಮ್ಮ ಒತ್ತಡ ಮತ್ತು ಅಗತ್ಯಗಳಿಗೆ ತಕ್ಕಂತೆ ಕಾನೂನು ಮಾಡಿಕೊಂಡರು. ಸ್ವಾತಂತ್ರ್ಯವೆಂದರೆ ಅರ್ಥ ಆತ್ಮಾಭಿವ್ಯಕ್ತಿ; ಈ ಸ್ವಾತಂತ್ರ್ಯ ಬರುವುದು ಧೈರ್ಯದಿಂದ ಮಾತ್ರ. ಅನಿಸಿದ್ದನ್ನು ಧೈರ್ಯವಾಗಿ ಹೇಳಲಾಗದಿದ್ದರೆ ನಾವು ನಮ್ಮ ಅನುಭವ ಕಂಡುಕೊಳ್ಳುತ್ತಿಲ್ಲ, ನಮ್ಮೊಂದಿಗೆ ಪ್ರಯೋಗ ನಡೆಸುತ್ತಿಲ್ಲ ಎಂದು ಅರ್ಥ. ಅಂಥವರು ತಮ್ಮ ಸ್ವಾತಂತ್ರ್ಯ ಕಳೆದುಕೊಳ್ಳುತ್ತಾರೆ....'ಹೆರಾಲ್ಡ್ ಲಾಸ್ಕಿ ಮೇಲೆ ಹೇಳಿರುವುದು ಇವತ್ತಿಗೂ ಈ ದೇಶದಲ್ಲಿ ನಿಜವಾಗಿದೆ. ಪರಿಸರವಾದ, ಧರ್ಮ, ವೈಚಾರಿಕತೆ, ಸಮಾಜವಾದ- ಎಲ್ಲವೂ ಇಲ್ಲಿ ತಿಂಗಳುಗಳಲ್ಲಿ ತುಕ್ಕು ಹಿಡಿದು ಹೋಗುತ್ತದೆ. ಐದು ವರ್ಷದ ಹಿಂದೆ ಕೆಂಪು ಬಾವುಟ ಹಿಡಿದು ``ಸ್ಟಾಲಿನ್ ವಾದ ಅಮರವಾಗಲಿ!'' ಎಂದು ಹೇಳುತ್ತಿದ್ದವನೇ ಇವತ್ತು ಅಡ್ವಾಣಿ ವಾದವನ್ನು ಬಾಯಿತುಂಬ ಘೋಷಿಸುವುದನ್ನು ನೋಡುತ್ತಿದ್ದೇವೆ. ಈ ನಡುವೆ ಇಂದಿರಾ, ರಾಜೀವ್ ಎಲ್ಲರ ವಾದ ಮೊಳಗಿತು; ಹಾಗೆಯೇ ವಿಜ್ಞಾನಿಗಳೆನ್ನಿಸಿಕೊಂಡವರು ಕ್ರಾಂತಿಕಾರಿಗಳನ್ನು ಕಂಡು ಸಿಡಿದೆದ್ದು ನಿಜವಾದ ಪರಂಪರೆಯತ್ತ ಕರೆದೊಯ್ಯುವ ದಿಟ್ಟರೂ ಇಲ್ಲ. ಗಾಂಧೀಜಿಯನ್ನು ಲಾಭದಾಯಕ ಭವನಗಳಾಗಿ ಮಾಡಿಕೊಂಡು ಭೋಜನ ಗಿಟ್ಟಿಸಿಕೊಳ್ಳುವವರನ್ನು ತಮ್ಮ ಹಒಸ ಗಾಂಧೀ ವಿಚಾರಗಳಿಂದ ರಿಪೇರಿ ಮಾಡಬಲ್ಲವರೂ ಇಲ್ಲ. ಆದ್ದರಿಂದಲೇ ಇಲ್ಲಿ ವಿಧೇಯತೆಯ ಅಪಾಯಗಳ ಬಗ್ಗೆ ಎಷ್ಟು ಹೇಳಿದರೂ ಸಾಲದು.
ಲಾಸ್ಕಿ ಬಗ್ಗೆ ಯೋಚಿಸುತ್ತಿರುವ ಈಗ್ಗೆ ಅರ್ಧ ಶತಮಾನದ ಹಿಂದೆ ಅಲ್ಲಿ ಆದದ್ದು ಮತ್ತು ಇಲ್ಲಿ ಆಗುತ್ತಿರುವ ಒಂದೊಂದು ವಿಷಯ ಎತ್ತಿಕೊಂಡು ಹೇಳಿ ಈ ಟಿಪ್ಪಣಿ ಮುಗಿಸುತ್ತೇನೆ. ಜಾನ್ ಗಂಥರ್ ಎಂಬ ಶ್ರೇಷ್ಠ ಅಮೆರಿಕನ್ ಪತ್ರಕರ್ತನಿದ್ದ; ಈತ ಬರೆದ `ಇನ್ಸೈಡ್' ಪುಸ್ತಕಗಳು ಇವತ್ತಿಗೂ ಚೆನ್ನಾಗಿವೆ. ಈತ ಜಗತ್ತಿನ ಮುಖ್ಯ ದೇಶಗಳಿಗೆ ಹೋಗಿ ಅಲ್ಲಿ ನಡೆಯುತ್ತಿರುವುದನ್ನು ಖುದ್ದು ಕಂಡು ಈ ಪುಸ್ತಕಗಳನ್ನು ಬರೆದ. ಎರಡನೆಯ ಜಾಗತಿಕ ಯುದ್ಧ 1945ರಲ್ಲಿ ಮುಗಿದ ಕೆಲವೇ ವರ್ಷಗಳಲ್ಲಿ ಹಂಗೇರಿ, ಪೊಲೆಂಡ್, ಚೆಕೊಸ್ಲಾವಾಕಿಯಾ, ಯುಗೋಸ್ಲಾವಿಯಾ, ರುಮೇನಿಯಾ ಮುಂತಾದ ದೇಶಗಳು ರಷ್ಯಾದ ಹಿಡಿತಕ್ಕೆ ಸಿಕ್ಕು ಕಮ್ಯುನಿಸ್ಟ್ ಆದವು; ಇಟಲಿ, ಜರ್ಮನಿ, ಫ್ರಾನ್ಸ್ಗಳಲ್ಲಿ ಕಮ್ಯುನಿಸ್ಟ್ ಪಕ್ಷ ಬೆಳೆಯ ತೊಡಗಿ ಈ ದೇಶಗಳು ಯಾವ ಗಳಿಗೆಯಲ್ಲೂ ಕಮ್ಯುನಿಸ್ಟ್ ಆಗಬಹುದು ಅನ್ನಿಸಿತ್ತು. ಆ ಸಮಯದಲ್ಲಿ ಜಾನ್ ಗಂಥರ್ ಆಗತಾನೆ ಕಮ್ಯುನಿಸ್ಟ್ ಆದ ದೇಶಗಳಲ್ಲಿ ಪ್ರವಾಸ ಮಾಡುವ ಮುನ್ನ ಇಟಲಿಯಲ್ಲಿ ಕೆಲವು ಕಾಲ ತಂಗಿದ್ದು ಅಲ್ಲಿ ಆಗುತ್ತಿರುವುದನ್ನು ನಓಡಿದ. ಆಗ ಇಟಲಿ ದಿವಾಳಿಯೆದ್ದ, ಅಸ್ತವ್ಯವಸ್ತವಾದ ದೇಶವಾಗಿತ್ತು. ಹೆಸರಿಗೆ ಪ್ರಜಾಪ್ರಭುತ್ವವಾಗಿದ್ದ ಇಟಲಿಯಲ್ಲಿ ಇದ್ದ ಶಕ್ತಿ ಕೇಂದ್ರಗಳು ಎರಡೇ- ಒಂದು ಚಚರ್್, ಇನ್ನೊಂದು ಕಮ್ಯುನಿಸ್ಟ್ ಪಾಟರ್ಿ. ಶೇ. 98 ಭಾಗ ಜನ ಕ್ಯಾಥೊಲಿಕ್ ಕ್ರಿಶ್ಚಿಯನ್ನರಿರುವ ಈ ದೇಶದಲ್ಲಿ 45 ಭಾಗ ಜನ ಕಮ್ಯುನಿಸ್ಟ್ ಪಕ್ಷದ ಸದಸ್ಯರಾಗಿದ್ದರು! ಅದು ಹೇಗೆ ಸಾಧ್ಯ? ಸಂಪ್ರದಾಯವಂತರೂ ದೈವಭಕ್ತಿಯುಳ್ಳವರೂ ಅನ್ನಿಸಿಕೊಳ್ಳುವ ಈ ಕ್ಯಾಥೊಲಿಕರು ನಿರೀಶ್ವರವಾದಿಯೂ ಧರ್ಮ ವಿರೋಧಿಯೂ ಆದ ಕಮ್ಯುನಿಸ್ಟ್ ಸಿದ್ಧಾಂತವನ್ನು ನಂಬುವುದು ಹೇಗೆ? ಇಲ್ಲೇ ಮನುಷ್ಯನ ಸೊಗಲಾಡಿತನ ಮತ್ತು ಸಮಯ ಸಾಧಕತನದ ``ವಿಧೇಯತೆ'' ಕಂಡುಬರುವುದು. ಜನಸಂಖ್ಯೆ ಹೆಚ್ಚಾದರೆ ಬಡತನ ಇನ್ನೂ ಹೆಚ್ಚಾಗಿ ಕಮ್ಯುನಿಸಂ ಬೆಳೆಯುವುದೆಂದು ಗುಟ್ಟಾಗಿ ನಂಬಿದ ಕಮ್ಯುನಿಸ್ಟರು, ಜನಸಂಖ್ಯೆಯನ್ನು ಕುಟುಂಬ ಯೋಜನೆ ಮೂಲಕ ನಿಯಂತ್ರಿಸುವುದು ಪಾಪವೆಂದು ಹೇಳುವ ಕ್ಯಾಥೊಲಿಕ್ ಪಾದ್ರಿಗಳು- ಇಬ್ಬರೂ ತಮ್ಮ ತಮ್ಮ ಸಿದ್ಧಾಂತಕ್ಕೆ ವಿಧೇಯರುಗಳೇ! ಈ ಅಪ್ರಾಮಾಣಿಕ ನಡವಳಿಕೆಯಿಂದಾಗಿ ಇವತ್ತು ಇಟಲಿಯಲ್ಲಾಗಿರುವುದನ್ನು ನೋಡಿ ಬೆಚ್ಚುತ್ತೇವೆ. ಸಕರ್ಾರಗಳು ಎಷ್ಟೇ ಕೆಟ್ಟರೂ, ರಾಜಕಾರಣಿಗಳು ಹೊಲಸೆದ್ದು ಹೋಗಿದ್ದರೂ ಇಟಲಿ ಕಳೆದ ವರ್ಷಗಳಲ್ಲಿ ಆಥರ್ಿಕವಾಗಿ ಚೇತರಿಸಿಕೊಂಡಿದ್ದು ನಿಜ; ಅಮೆರಿಕದ ನೆರವು, ನೇಟೋ ರಕ್ಷಣೆ - ಇದೆಲ್ಲ ಸಹಾಯಕವಾದವು. ಆದರೆ ಇವತ್ತು ಇಟಲಿಯಲ್ಲಿ ಕಾಣುವ ಸಾಮಾಜಿಕ, ರಾಜಕೀಯ ದೃಶ್ಯ ಭೀಕರವಾದದ್ದು. ಕಳೆದ ಕೆಲವು ತಿಂಗಳಲ್ಲೇ ಹತ್ತಾರು ಜನ ವ್ಯಾಪಾರಿಗಳು, ರಾಜಕಾರಣಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ; ಸಾವಿರಾರು ಜನ `ಗಣ್ಯ' ರಾಜಕೀಯ, ವಾಣಿಜ್ಯ ವ್ಯಕ್ತಿಗಳನ್ನು ಅರೆಸ್ಟ್ ಮಾಡಿ ಜೈಲಿಗೆ ತಳ್ಳಲಾಗಿದೆ; ಹಣಕ್ಕಾಗಿ ಕಳ್ಳರ ಪಡೆಯನ್ನೇ ಸೃಷ್ಟಿಸಿದವರು, ರಾಜಕೀಯ ಏಳ್ಗೆಗಾಗಿ ಮಾಫಿಯಾವನ್ನು ಬೆಂಬಲಿಸಿದವರು, ಚುನಾವಣೆಯ ವಂತಿಗೆಗೆಂದು ಕೋಟ್ಯಂತರ ಲೀರಾಗಳನ್ನು ಜೇಬಿಗಿಳಿಸಿದವರು- ಇವರೆಲ್ಲ ಜೈಲಲ್ಲಿ ಕೊಳೆಯುತ್ತಾ ಇಟಲಿಯನ್ನು ನೋಡಿ ಇಡೀ ಜಗತ್ತು ನಗುವಂತೆ ಮಾಡಿದ್ದಾರೆ.
ಭಾರತಕ್ಕೆ ಆ ಗತಿ ಬರಲಿದೆ. ಇಲ್ಲಿಯ ರಾಜಕಾರಣಿ, ವ್ಯಾಪಾರಿ, ಕೈಗಾರಿಕೊದ್ಯಮಿ ಜನರ ಕೋಪವನ್ನು ಅರ್ಥಮಾಡಿಕೊಳ್ಳುತ್ತಿಲ್ಲ; ಪಾಲರ್ಿಮೆಂಟ್ ಸದಸ್ಯರೇ ತಮ್ಮ ಕುಟಿಲತೆಯ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳತೊಡಗಿದ್ದಾರೆ. ನಾನಿಲ್ಲಿ ಅದನ್ನೆಲ್ಲ ಚಚರ್ಿಸುವುದಿಲ್ಲ. ಅತಿ ಸಾಮಾನ್ಯ, ದಿನನಿತ್ಯದ ವಿಷಯ ತಿಳಿಸುತ್ತೇನೆ. ಸಕರ್ಾರ ಜೋರಾಗಿರಬೇಕೆಂದು ನಂಬಿ ಅದನ್ನು ಬಳಸಿ ಇಲ್ಲಿ ಭೂಸುಧಾರಣೆಯನ್ನು ಜಾರಿಗೆ ತಂದವರು ಅರಸು; ಹಾಗೆಯೇ ಇನ್ನೂ ಕಎಲವು ವಲಯಗಳಲ್ಲಿ ಮಾಡಲು ಯತ್ನಿಸಿದರು. ಸಕರ್ಾರವನ್ನು ಬಲಿಷ್ಠಗೊಳಿಸುತ್ತಾ ಹೋದಂತೆ ಅದನ್ನು ಪರಿಶುದ್ಧವಾಗಿ ಇಡುವುದು ಕಷ್ಟವಾಗುತ್ತದೆ ಎಂಬುದು ಅರಸು ಅವರಿಗೆ ಗೊತ್ತಾಗಲಿಲ್ಲ. ತಾವೇ ಪರಿಶುದ್ಧವಾಗಿರುವ ಬಗ್ಗೆಯೇ ಅವರು ನಿಗಾ ವಹಿಸಿರಲಿಲ್ಲ. ಹೀಗಾಗಿ ಅನೇಕಾನೇಕ ಕಾನೂನು ಮಾಡಿದರು. ಅವುಗಳಲ್ಲಿ ಒಂದು `` ಇಲ್ಲಿರುವ ಸಕ್ಕರೆ ಕಾಖರ್ಾನೆಗೆ ಕಬ್ಬು ಒದಗಿಸುವುದಕ್ಕಾಗಿ ಈ ಏರಿಯಾದ ಜನ ಕಬ್ಬು ಮಾತ್ರ ಬೆಳೆಯಬೇಕು'' ಎಂಬುದು. ಕಬ್ಬು ಬೆಳೆಯುವುದನ್ನು ಲಾಭದಾಯಕ ಕೃಷಿಯಾಗಿ ಮಾಡುವುದು ಸಕ್ಕರೆ ಕಾಖರ್ಾನೆಯ ಕರ್ತವ್ಯ; ಸಕ್ಕರೆಗೆ ತಕ್ಕ ಬೆಲೆ ಸಿಕ್ಕುವಂತೆ ಏಪರ್ಾಟಾಗುವುದು ಮಾಕರ್ೆಟ್ ನಿಯಮಗಳಿಂದಾಗಿ. ಇಲ್ಲಿ ಸಕರ್ಾರಕ್ಕೆ ಏನು ಕೆಲಸವೋ ಗೊತ್ತಿಲ್ಲ. ಅರಸು ಮಾಡಿದ ಇನ್ನೊಂದು ನಿಯಮ ``ಹರಿಜನರ ಜಮೀನುಗಳನ್ನು ಆ ಜಮೀನನ್ನು ಪಡೆದು ಇಪ್ಪತ್ತು ವರ್ಷಗಳಾಗುವವರೆಗೆ ಯಾರೂ ಕೊಂಡುಕೊಳ್ಳಬಾರದು''.
``ನನಗೆ ಇದು ಇಪ್ಪತ್ತು ವರ್ಷವೋ, ಹತ್ತು ವರ್ಷವೋ ಗೊತ್ತಿಲ್ಲ. ನೀನು ಅದನ್ನು ಚೆಕ್ ಮಾಡಿ ಹೇಳಿ. ಆದರೆ ಇದು ಹರಿಜನರ ವಂಶಪಾರಂಪರ್ಯದ ಜಮೀನಿಗೂ ಅನ್ವಯಿಸುತ್ತದೆಯೇ? ಸಕರ್ಾರದಿಂದ ಪಡೆದ ಜಮೀನಿಗೆ ಮಾತ್ರವೆ? ಹರಿಜನರ ಕುಟುಂಬವೊಂದು ತಾನೇ ಕಂಡುಕೊಂಡ ಆಸ್ತಿಗೂ ಅನ್ವಯಿಸುತ್ತದೆಯೇ?'' ಅಂದೆ.
ನನ್ನೊಂದಿಗೆ ಮಾತಾಡುತ್ತಿದ್ದವರು ದಲಿತ ಸಂಘರ್ಷ ಸಮಿತಿಯ ಗೆಳೆಯರೊಬ್ಬರು. ಅವರು ಹೇಳಿದ, ``ಅದೆಲ್ಲ ವಿವರ ಬೇಕಿಲ್ಲ. ದಲಿತರ ಜಮೀನನ್ನು ಯಾರೂ ಎಂದೆಂದಿಗೂ ಕೊಳ್ಳದಿರುವಂತೆ ಕಾನೂನು ಆಗಬೇಕು. ಹಾಗಿದ್ದರೆ ಮಾತ್ರ ಹರಿಜನರು ಭೂಮಾಲೀಕರಾಗಿ ಉಳಿಯುತ್ತಾರೆ'' ಅಂದರು.
ನಾನು ಯೋಚಿಸಿ ಹೇಳಿದೆ, `` ಇದನ್ನೇ ನಾನು ಮೌಢ್ಯ ಅನ್ನುವುದು. ಕ್ಲೀಷೆ ಮತ್ತು ಎಂದೋ ನಂಬಿದ್ದಕ್ಕೆ ವಿಧೇಯತೆ- ಎನ್ನುವುದು ಕೂಡ. ನಿಮಗೆ ಮನೆ, ಆಸ್ತಿ, ಒಡವೆ, ಜಮೀನಿನ ಬಗ್ಗೆ ಏನೇನೂ ಗೊತ್ತಿರುವಂತಿಲ್ಲ. ಮನೆಯನ್ನು ಒಡವೆಗೆ, ಒಡವೆಯನ್ನು ಮನೆಗೆ, ಎರಡನ್ನೂ ಜಮೀನಿಗೆ, ಜಮೀನನ್ನು ಹಣಕ್ಕೆ ಬದಲಾಯಿಸುವ ಅವಕಾಶವಿದ್ದಾಗಲೇ ಅವು ಸಂಪತ್ತು. ಅವುಗಳ ಹುಟ್ಟು ಗುಣ ಮತ್ತು ಹೆಗ್ಗಳಿಕೆ ಕನ್ವಟರ್ಿಬಿಲಿಟಿ. ಈಗ ಒಂದು ಹರಿಜನ ಕುಟುಂಬಕ್ಕೆ ಬೆಂಗಳೂರಿನ ಹತ್ತಿರ ಐದು ಎಕರೆ ಜಮೀನಿತ್ತು ಅಂದಿಟ್ಟುಕೊಳ್ಳೋಣ. ಅದರಲ್ಲಿ ರಾಗಿ ಬೆಳೆದರೆ ಇಪ್ಪತ್ತು ಚೀಲ ರಾಗಿ ಆಗುತ್ತದೆ; ಅಂದರೆ ರೂಪಾಯಿಗಳಲ್ಲಿ ಅದು ನಾಲ್ಕೈದು ಸಾವಿರ. ಭೂಮಿಯನ್ನು ಕನಿಷ್ಠ ಹತ್ತು ಲಕ್ಷ ಹಣ ಬರುತ್ತದೆ. ಬಾಡಿಗೆಗೆ ಕೊಟ್ಟರೆ ಕನಿಷ್ಠ ಐವತ್ತು ಸಾವಿರ ಬಾಡಿಗೆ ಬರುತ್ತದೆ. ಇವು ಯಾವನ್ನೂ ಹರಿಜನರು ಮಾಡಕೂಡದು ಎಂದು ಶರತ್ತು ಹಾಕುವರು ಅವರಿಗೆ ಅನ್ಯಾಯ ಮಾಡುತ್ತಾರೆ. ಅಲ್ಲದೆ ಶರತ್ತು ಹಾಕುವವರು ಮೂಢರೂ ಆಗಿರುತ್ತಾರೆ. ಯಾಕೆಂದರೆ ಅವರಿಗೆ ಕೃಷಿ, ಉದ್ಯಮ ಕೈಗಾರಿಕೆ ಇವುಗಳಿಗೆ ಆಧುನಿಕ ಸಮಾಜದಲ್ಲಿ ಯಾವ ಯಾವ ಸ್ಥಾನವಿದೆ ಎಂಬುದು ಗೊತ್ತಿರುವುದಿಲ್ಲ. ರಾಗಿ ಬೆಳೆಯುತ್ತಾ ಹೋಗುವುದೇ ಶ್ರೇಷ್ಠ ಎಂದು ವಾದಿಸುವವ ಹುಂಬ ಎಂದು ಪ್ರತ್ಯೇಕ ಹೇಳಬೇಕಾಗಿಲ್ಲ, ಅಲ್ಲವೆ?''
-ಸೆಪ್ಟೆಂಬರ್ 22, 1993



2 ಹೀಗಂತಾರೆ:
ಅಲೆಮಾರಿಯವರೆ,
ಲಂಕೇಶರ ಚಿಂತನಾವಿಧಾನ ಸೂಕ್ಷ್ಮವಾದದ್ದು. ಅವರ ಒಂದು ಅಂಶವನ್ನು ನಮಗೆ ತೋರಿದ ನಿಮಗೆ ಧನ್ಯವಾದಗಳು.
ಗುರುವೇ... ರೀಲಾಂಚ್ ಚನ್ನಾಗಿದೆ....
ಒಂದು ಕಮೆಂಟನ್ನು ಪೋಸ್ಟ್ ಮಾಡಿ