ವರ್ಲ್ಡ್ ಕಪ್ ಫೈನಲ್ ನೋಡದವರು ಕ್ರಿಕೆಟ್ ಪ್ರೇಮಿಗಳ ದೃಷ್ಟಿಯಲ್ಲಿ ಮೂರ್ಖರೇ. ಈ ಬಾರಿ ಪಾಕಿಸ್ತಾನವನ್ನು ಮಣಿಸಿ ಫೈನಲ್ ಗೆ ಬಂದಿದ್ದನ್ನು ಮಾಧ್ಯಮ ವೀರಗಾಥೆಯನ್ನಾಗಿ ಬಣ್ಣಿಸಿತ್ತು. ಅಂಥ ಪಂದ್ಯವನ್ನೂ ನೋಡದೆ ಇದ್ದರೆ ಮತ್ತೇನು? ಇಷ್ಟಾಗಿಯೂ ನನಗೆ ನೋಡುವ ಅವಕಾಶ ವಾಗಲಿಲ್ಲ. ಶ್ರೀಲಂಕಾದ ಆಟವನ್ನಷ್ಟೇ ನೋಡಿಕೊಂಡು ಊರಿನ ಬಸ್ ಹತ್ತಿದೆ. ಬಸ್ ಹೊರಟಾಗ ಬಹುಶಃ 9 ಗಂಟೆ. ಬಸ್ ನಲ್ಲಿದ್ದವರೆಲ್ಲಾ ತಮ್ಮ ಕೈಯಲ್ಲಿದ್ದ ಮೊಬೈಲ್ ಕೀಗಳನ್ನು ಒತ್ತುತ್ತಲೇ ಇದ್ದರು. ಗಳಿಗೆಗೊಮ್ಮೆ ಮೊಬೈಲ್ 'ಮೆಸೇಜ್ ಬಂದಿದೆ' ಅಂತ ಕೂಗಿಕೊಳ್ಳುತ್ತಲೇ ಇತ್ತು.
ಅಷ್ಟರ ಮಟ್ಟಿನ ಕುತೂಹಲ ಸಹಜವಾಗಿ ಇದ್ದೇ ಇರುತ್ತದೆ ಎಂದುಕೊಂಡೆ. ನಾನೂ ನನ್ನ ಮೊಬೈಲ್ ನಲ್ಲಿದ್ದ ನ್ಯೂಸ್ ಹಂಟ್ ನಲ್ಲಿ ಲೈವ್ ಅಪ್ ಡೇಟ್ ನೋಡುತ್ತಾ.. ತುಸು ಆತಂಕ, ಸಮಾಧಾನದಿಂದಲೇ ದಾರಿ ಸವೆಸಿದೆ..
ಹೊತ್ತು ಕಳೆದಂತೆ.. ಕಡೆಯ ಓವರ್ ಗಳು ಹತ್ತಿರ ಬಂದಂತೆ ಬಸ್ ನಲ್ಲಿ ಎಲ್ಲರೂ ಕೂತಲ್ಲೇ ಹಾರಾಡುತ್ತಿದ್ದರು. ಕೆಲವರಿಗೆ ಏನೂ ಆಗೋಲ್ಲ... ಅನ್ನೋ ಆತಂಕ, ಇನ್ನೂ ಕೆಲವರಂತು ಹುಲ್ಲು ಕಡ್ಡಿ ಹಿಡಿದು ಕೂತಿದ್ರು.. ಭಾರತ ಗೆಲ್ಲುತ್ತೆ.. ಗೆಲ್ಲುತ್ತೆ ಅಂತಾ..
ಒಂದಿಷ್ಟು ಹುಡುಗಿಯರಂತು.. ಯಾರ್ಯಾರಿಗೊ ಮೆಸೇಜ್ ಮಾಡಿ ಅಪ್ ಡೇಟ್ ಕೇಳುತ್ತಿದ್ದರು. ನನ್ನ ಪಕ್ಕದಲ್ಲೇ ಕೂತಿದ್ದ ಡಿಪ್ಲೋಮಾ ಓದುವ ಹುಡುಗನಂತೂ ಪ್ರತಿ ಬಾಲನ್ನು ಕೂತಲ್ಲೇ ಆನಂದಿಸಬಿಟ್ಟ.
ತನ್ನ ಎರಡು ಮೊಬೈಲ್ ಗಳಿಂದ ಮೆಸೇಜ್ ಕಳಿಸುತ್ತಿದ್ದ. ಕಡೆಯ ನಾಲ್ಕು ಮೂರು ಓವರ್ ಗಳನ್ನು ತನ್ನ ಸ್ನೇಹಿತನಿಗೆ ಕರೆ ಮಾಡಿ ಲೈವ್ ಕೇಳಿಸಿಕೊಂಡು.. ಬಾಲ್ ಟು ಬಾಲ್ ಕಮೆಂಟ್ರಿ ಕೊಟ್ಟ..
ಧೋನಿ ಬಾರಿಸಿದ ಸಿಕ್ಸರ್ ಗೆ ಇಲ್ಲಿ ಕೂಗಾಡಿದ.
ಇದಕ್ಕೂ ಹತ್ತು ಹದಿನೈದು ನಿಮಿಷ ಮೊದಲು ತುಮಕೂರು ಪ್ರವೇಶಿಸಿದ್ದ ಬಸ್ ನಿಂದ ಕೆಲವರು ಅವಸರಕ್ಕೆ ಇಳಿದು ಬಿಟ್ಟರು. ಅವರಿಗೆ ತುಮಕೂರು ಫೀಲ್ಡ್ ಒಂದರಲ್ಲಿ ಹಾಕಿದ್ದ ದೊಡ್ಡ ಪರದೆ ಕಂಡಿತ್ತು. ಐತಿಹಾಸಿಕ ಪದ್ಯದ ಕಡೆಯ ಕ್ಷಣಗಳನ್ನು ತಪ್ಪಿಸಿಕೊಳ್ಳಬಾರದು ಅಂತ.. ದುಡು ದುಡು ಹಾರಿಕೊಂಡರು.
ಇನ್ನು ನನ್ನ ಪಕ್ಕ ಕೂತಿದ್ದ ಆ ಹುಡುಗನ ಬಗ್ಗೆ ಹೇಳ್ತಿದ್ನಲ್ಲ.. ಅವನಂತು.. ತನ್ನ ಸ್ನೇಹಿತರಿಗೆ ಫೋನ್ ಮಾಡಿ ಭಾರತದ ಗೆಲುವಿನ ಸಂತಸವನ್ನು ಹಂಚಿಕೊಂಡ.. ಮ್ಯಾಚ್ ತಿರುವುಗಳ ಬಗ್ಗೆ ಅಚ್ಚರಿಯಿಂದ ಮಾತಾಡಿದ.
'' ಮಗ ಅಲ್ಲೇ ಇದ್ದಿದ್ರೆ.. ನಿಮ್ ಜೊತೆ ಸ್ಟೆಪ್ ಹಾಕಿ ಬಿಡ್ತಿದ್ದೆ..'' ಅಂದ. ಮತ್ತೊಬ್ಬರಿಗೆ ಕಾಲ್ ಮಾಡಿ '' ನಮ್ ಟೀಮ್ ಹೆಂಗ್ ಸೋಲುತ್ತೆ ಗುರು'' ಅಂದ.
ಅಷ್ಟರಲ್ಲಿ ಅವರಪ್ಪನಿಂದಲೇ ಕಾಲ್ ಬಂತು..''ಗೊತ್ತಾಯ್ತು ಬಿಡಪ್ಪ.. ಇಂಡಿಯಾ ಗೆದ್ದೇ ಗೆಲ್ಲುತ್ತೆ ಅಂತ ಹೇಳಿರ್ಲಿಲ್ವಾ?'' ಅಂತ ತನ್ನ ಗೆಲುವನ್ನು ಸಂಭ್ರಮಿಸಿದ..
ಇಷ್ಟಾಗಿ ತುಮಕೂರು ಸಿಟಿಯಿಂದ ಹೊರ ಬರುವ ಹೊತ್ತಿಗೆ ರೋಡ್ ಬ್ಲಾಕ್.. ಅಲ್ಲಿ ಗೆಲುವಿನ ಸಂಭ್ರಮಾಚರಣೆ. ಬಸ್ ನಿಲ್ಲಿಸಿ.. ರಸ್ತೆಯಲ್ಲಿ ಪಟಾಕಿ ಹೊಡೆದು. ಅಲ್ಲೇ ಕತ್ತರಿಸಿದ ಕೇಕನ್ನ ಬಸ್ ನಲ್ಲಿದ್ದವರಿಗೆಲ್ಲಾ ಹಂಚಿದರು.
ಸಿಟಿಯಿಂದು ಸುಮಾರು ದೂರ ಬಂದ ಮೇಲೂ ಬಾನಿಗೆ ಚಿಮ್ಮುತ್ತಿದ್ದ ಪಟಾಕಿಗಳ ಬೆಳಕು, ಕೇಳಿಸುತ್ತಿದ್ದ ಸದ್ದು ಈಗಲೂ ನೆನಪಾಗುತ್ತೆ..
**
ಮನೆಗೆ ಹೋದ ಮೇಲೆ ನಮ್ಮಪ್ಪ ಕೂಡ ಹೇಳ್ತಾ ಇದ್ರು.. ಚಿತ್ರದುರ್ಗದ ಗಾಂಧಿ ಸರ್ಕಲ್ ನಲ್ಲಿ ಹಿಂದೆಂದೂ ಸೇರದಷ್ಟು ಜನ ಸೇರಿದ್ರಂತೆ. ಪಟಾಕಿ, ಜಯಕಾರ, ಬೈಕ್, ಕಾರುಗಳ ಸದ್ದು ಭಾರತ ವಿಶ್ವಕಪ್ ಗೆದ್ದ ಗಳಿಗೆಯನ್ನು ತಮ್ಮ ಬದುಕಿನೊಂದಿಗೆ ಬೆಸೆದುಕೊಂಡು ಅವಿಸ್ಮರಣೀಯಗೊಳಿಸಿಕೊಂಡರು ಅನ್ನಿಸಿತು.
ತಡರಾತ್ರಿ ಎರಡೂವರೆಗೆ ಮನೆ ತಲುಪಿದೆ. ಸ್ಟಾರ್ ಕ್ರಿಕೆಟ್ ನಲ್ಲಿ ಫೈನಲ್ ಪಂದ್ಯದ ಮರು ಪ್ರಸಾರವನ್ನೂ ನೋಡಿದೆ.
ವಿಶ್ವಕಪ್ ಗೆಲವಿನ ಭಿನ್ನ ಅನುಭವಗಳಿಗೆ ಸಾಕ್ಷಿಯಾದ ಖುಷಿ ನನ್ನದಾಗಿತ್ತು.
***
ಭಾರತ 28 ವರ್ಷಗಳ ಬಳಿಕ ವರ್ಲ್ಡ್ ಕಪ್ ಗೆದ್ದುಕೊಂಡಿತು. ಧೋನಿ ನಾಯಕತ್ವದಲ್ಲಿ ಆದ ಸಾಧನೆಯನ್ನು ತಲೆಮಾರುಗಳವರೆಗೆ ನೆನಪಿಸಿಕೊಳ್ಳುತ್ತೇವೆ. ನಾನಿನ್ನು ಹುಟ್ಟಿರದೇ ಇದ್ದ ಕಾಲದಲ್ಲಿ ಕಪಿಲ್ಸ್ ಡೆವಿಲ್ಸ್ ಕಪ್ ಗೆದ್ದಿದ್ದರು. ಬುದ್ದಿ ಬಂದಾಗಿನಿಂದ ಕ್ರಿಕೆಟ್ ನೋಡುತ್ತಾ ಬಂದಿದ್ದೀನಿ. ಮೊನ್ನೆಯ ವರೆಗೆ ವಿಶ್ವಕಪ್ ನೋಡುವ ಕ್ಷಣ ನನ್ನದಾಗಲಿಲ್ಲ. ಇರಲಿ.
ಮರುದಿನ ಪತ್ರಿಕೆಗಳಲ್ಲಿ ಭಾರತೀಯ ತಂಡದ ಸಾಧನೆ ಬಗ್ಗೆ ಅಪಾರ ಪ್ರಶಂಸೆ. ಧೋನಿಯ ಬಗ್ಗೆಯೂ ಮೆಚ್ಚುಗೆ ಜೊತೆಗೆ ಧೋನಿ ಅದೃಷ್ಟವಂತ ಎಂಬ ಮಾತು ಎಲ್ಲ ವರದಿಗಳಲ್ಲಿ. ಧೋನಿ ಭಾರತೀಯ ಕ್ರಿಕೆಟ್ ತಂಡಕ್ಕೆ ಕಾಲಿಟ್ಟಾಗಿನಿಂದ ಅದೃಷ್ಟ ಅವನ ಕೈ ಹಿಡಿದಿದೆ ಎಂಬ ವರದಿಗಳೇ ಕಂಡವು.
ಇದ್ಯಾಕೋ ಮನಸ್ಸಿಗೆ ಒಪ್ಪಿಗೆಯಾಗಲಿಲ್ಲ. ಧೋನಿಯ ಪರಿಶ್ರಮವೇ ಇಲ್ಲದೆ ಅದೃಷ್ಟ ಎಷ್ಟು ತಾನೆ ಕೈ ಹಿಡಿಯಲು ಸಾಧ್ಯ ಅನ್ನೋ ಸಿಂಪಲ್ ಪ್ರಶ್ನೆ ನನ್ನದು.
ಈ ವಾರದ ಓಪನ್ ಮ್ಯಾಗಜೀನ್ ನಲ್ಲಿ ಧೋನಿಯದ್ದೇ ಕವರ್ ಸ್ಟೋರಿ, ''ಡೆಸ್ಟಿನೀಸ್ ಕ್ಯಾಪ್ಟನ್'' ಅಂತ ಧೋನಿ ಕುರಿತು ಬರೆದಿದ್ದಾರೆ. ಧೋನಿ ಅದೃಷ್ಟವಂತನೆ ಎಂಬ ಬಗ್ಗೆಯೇ ಚರ್ಚೆ ಮಾಡಿದ್ದಾರೆ. ಈ ಲೇಖನದ ಒಂದು ಸಾಲು ಹೀಗಿದೆ: They called Mohammed Azharuddin Destiny’s Child. Dhoni is only more so. He is Destiny’s Captain. He tells Destiny where to field!!
ಇದೇ ಪತ್ರಿಕೆಯಲ್ಲಿ ಎರಡು ವರ್ಷಗಳ ಹಿಂದೆಯೇ ಒಂದು ಲೇಖನ (http://www.openthemagazine.com/article/sports/the-answer) ಇದೇ ವಿಷಯವಾಗಿ ಪ್ರಕಟಗೊಂಡಿದೆ. ಅದನ್ನೂ ಒಮ್ಮೆ ಓದಿ. ಧೋನಿಯ ತಂತ್ರಗಾರಿಕೆ, ತಾಳ್ಮೆ, ಸಜ್ಜನಿಕೆ ಎಲ್ಲವೂ ಹೇಗೆ ಆತನ ಯಶಸ್ಸನ್ನು ರೂಪಿಸುತ್ತವೆ ಎಂಬುದಕ್ಕೆ ಇಲ್ಲಿ ಉತ್ತರ ಸಿಗುತ್ತವೆ.

1 ಹೀಗಂತಾರೆ:
ಕ್ರಿಕೆಟ್ ಒಂದು ಮೂರ್ಖರ ಆಟ. ಅದನ್ನು ಆಡುವವರು, ನೋಡುವವರು ಎಲ್ಲರೂ ಮೂರ್ಖರು!
ಒಂದು ಕಮೆಂಟನ್ನು ಪೋಸ್ಟ್ ಮಾಡಿ